ಭಾರ ಹೊರುವ ಕಾಂಕ್ರೀಟ್ ಸಂರಚನೆಗಳು ಒಂದು ಮನೆಯ ಅತ್ಯಂತ ಮುಖ್ಯ ಭಾಗಗಳು; ಈ ಕಾರಣಕ್ಕಾಗಿ ಇಲ್ಲಿ ಅತ್ಯಂತ ಹೆಚ್ಚಿನ ಒತ್ತಡವನ್ನು ತಾಳಿಕೊಳ್ಳುವ ಮತ್ತು ಬಿರುಸು ಹವಾಮಾನ ಪರಿಸ್ಥಿತಿಯಲ್ಲೂ ಉಳಿಯುವ ಒಂದು ವಿಶೇಷ ಸಿಮೆಂಟ್ ಬೇಕಾಗುತ್ತದೆ.
ನೀವು ನಿಮ್ಮ ಕನಸಿನ ಮನೆಯನ್ನು ಕಟ್ಟುವಾಗ, ಉಚ್ಚ ಗುಣಮಟ್ಟದ ಕಚ್ಚಾ ಸಾಮಗ್ರಿಗಳ ಬಳಕೆಯನ್ನು ಖಾತ್ರಿಪಡಿಸುತ್ತಲೇ ಏಕಕಾಲಕ್ಕೆ ಮನೆಯ ನಿರ್ಮಾಣ ಬೇಗನೇ ಮುಗಿಸುವ ಆಕಾಂಕ್ಷೆಯಲ್ಲಿ ಇರುತ್ತೀರಿ.
ನಮ್ಮ ಗ್ರಾಹಕರಾದ ನಿಮಗೆ ಉತ್ಕೃಷ್ಟ ಉತ್ಪನ್ನಗಳನ್ನು ನೀಡುವ ನಮ್ಮ ಯತ್ನದ ಭಾಗವಾಗಿ ನಾವು ಕಡಿಮೆ ಕಾಲಾವಕಾಶದಲ್ಲಿ ಹೆಚ್ಚು ಗಟ್ಟಿಮುಟ್ಟಾದ ಕಾಂಕ್ರೀಟ್ ಸಂರಚನೆಗಳನ್ನು ನಿರ್ಮಿಸುವ, ನಿರ್ದಿಷ್ಟ ವಿನ್ಯಾಸದ ಸಿಮೆಂಟ್ ಆದ ಬಿರ್ಲಾ A1 ಸ್ಟ್ರಾಂಗ್ಕ್ರೀಟ್ಅನ್ನು ಹೆಮ್ಮೆಯಿಂದ ಪರಿಚಯಿಸುತ್ತಿದ್ದೇವೆ. ಇದರರ್ಥ, ನಿಮ್ಮ ಕನಸಿನ ಮನೆ ಬೇಗನೇ ಸಿದ್ಧವಾಗುತ್ತದೆ ಮತ್ತು ಬಹುಕಾಲ ಬಾಳುತ್ತದೆ.
ನಿಮ್ಮ ಕನಸಿನ ಮನೆಯಲ್ಲಿ ಅಡಿಪಾಯ, ಕಾಲಮ್, ಬೀಮ್ ಹಾಗೂ ಸ್ಲ್ಯಾಬ್ಗಳಂತಹ ಭಾರ-ಹೊರುವ ಸಂರಚನೆಗಳು ಅತಿ ಮುಖ್ಯ ಭಾಗಗಳಾಗಿವೆ; ಈ ಕಾರಣಕ್ಕಾಗಿ ಅವುಗಳಿಗೆ ಅತ್ಯಂತ ಹೆಚ್ಚಿನ ಒತ್ತಡವನ್ನು ತಾಳಿಕೊಳ್ಳುವ ಮತ್ತು ಬಿರುಸು ಹವಾಮಾನ ಪರಿಸ್ಥಿತಿಗಳಲ್ಲೂ ಉಳಿಯುವ ಒಂದು ವಿಶೇಷ ಸಿಮೆಂಟ್ ಬೇಕಾಗುತ್ತದೆ.
ನಿಮ್ಮ ಮನೆಯ ನಿರ್ಮಾಣಕ್ಕಾಗಿ ಬಿರ್ಲಾ A1 ಸ್ಟ್ರಾಂಗ್ಕ್ರೀಟ್ಅನ್ನು ಆದರ್ಶಪ್ರಾಯವಾಗಿಸುವ ಉದ್ದೇಶದಿಂದ ನಾವು ಈ ಸಿಮೆಂಟಿನ ಮುಖ್ಯ ಗುಣಗಳನ್ನು ಪ್ರಶಸ್ತಗೊಳಿಸಿದ್ದೇವೆ. ಇವುಗಳಲ್ಲಿ ನಯ (ಸೂಕ್ಷ್ಮತೆ), ಪಾರ್ಟಿಕಲ್ ಸೈಜ್ ಡಿಸ್ಟ್ರಿಬ್ಯೂಶನ್ ಮತ್ತು ಅದಕ್ಕೆ ಬೇಕಾಗುವ ಆ್ಯಡ್ಮಿಕ್ಸ್ಚರ್ ಪ್ರಮಾಣ ಇವು ಸೇರುತ್ತವೆ. ಇವುಗಳಲ್ಲಿ ಪ್ರತಿಯೊಂದು ಗುಣವನ್ನು ಪ್ರಶಸ್ತಗೊಳಿಸಿರುವುದರಿಂದ ನಿಮ್ಮ ಕನಸಿನ ಮನೆ ಖಾತರಿಯಾಗಿ ಹೆಚ್ಚು ಗಟ್ಟಿಮುಟ್ಟಾಗಿರುತ್ತದೆ.
ಬಿರ್ಲಾ A1 ಸ್ಟ್ರಾಂಗ್ಕ್ರೀಟ್ನ ಹೆಚ್ಚಿನ ಸಾಮರ್ಥ್ಯ ಕಾರಣ ಮಿಶ್ರಣ, ಸಾಗಾಣಿಕೆ, ನಿಯೋಜನೆ (ಪ್ಲೇಸ್ಮೆಂಟ್) ಮತ್ತು ಸಾಂದ್ರಗೊಳ್ಳುವಿಕೆಯ (ಕಾಂಪ್ಯಾಕ್ಷನ್) ವಿಷಯದಲ್ಲಿ ಕಾಂಕ್ರೀಟ್ ಸಾಕಷ್ಟು ದಕ್ಷತೆಯನ್ನು ಹೊಂದಿರುತ್ತದೆ. ಇದರಿಂದ ಹೆಚ್ಚು ಗಾಢವಾದ, ಹೆಚ್ಚು ಗಟ್ಟಿಮುಟ್ಟಾದ ಮತ್ತು ಹೆಚ್ಚು ಸಾಂದ್ರವಾದ ಕಾಂಕ್ರೀಟ್ ಸಿಗುತ್ತದೆ. ಈ ರೀತಿಯಲ್ಲಿ ತಯಾರಾದ ಗಾಢ ಕಾಂಕ್ರೀಟ್ ಸ್ಟೀಲ್ ಬಾರ್ ಅಥವಾ ರೀಇನ್ಫೋರ್ಸ್ಮೆಂಟ್ ಜೊತೆ ಇನ್ನಷ್ಟು ಬಲಶಾಲಿಯಾದ ನಂಟನ್ನೂ ಪಡೆಯುತ್ತದೆ.
ಬಿರ್ಲಾ A1 ಸ್ಟ್ರಾಂಗ್ಕ್ರೀಟ್ ಅನ್ನು ಪ್ರಸಿದ್ಧ ಪ್ರೆಶರ್ ಸಸ್ಟೇನಿಂಗ್ ಟೆಕ್ನೋಲೊಜಿಯ (PST®) ಮೂಲಕ ತಯಾರಿಸಲಾಗುತ್ತದೆ; ಇದು ಓರಿಯೆಂಟ್ ಸಿಮೆಂಟ್ನ ಸ್ವಾಮ್ಯದ ತಂತ್ರಜ್ಞಾನವಾಗಿದೆ ಮತ್ತು ಬಿರ್ಲಾ A1 ಸ್ಟ್ರಾಂಗ್ಕ್ರೀಟ್ ಬಳಸಿ ಸಿದ್ಧವಾಗುವ ಕಾಂಕ್ರೀಟ್ ಅತ್ಯಂತ ಹೆಚ್ಚಿನ ಒತ್ತಡವನ್ನು ತಾಳಿಕೊಳ್ಳುವಂತೆ ನೋಡಿಕೊಳ್ಳುತ್ತದೆ.
ನಮ್ಮ ಅತ್ಯಾಧುನಿಕ ಸ್ಥಾವರಗಳ NABL ಪ್ರಮಾಣಿತ ಪ್ರಯೋಗಶಾಲೆಯಲ್ಲಿ ನಡೆಯುವ ಕಟ್ಟುನಿಟ್ಟಿನ ಗುಣಮಟ್ಟ ಪರೀಕ್ಷೆಗಳ ಮೂಲಕ ಈ ಸಿಮೆಂಟಿನ ಪಾರ್ಟಿಕಲ್ ಸೈಜ್ ಡಿಸ್ಟ್ರಿಬ್ಯೂಶನನ್ನು ಎಚ್ಚರಿಕೆಯಿಂದ ಕಾಯ್ದುಕೊಳ್ಳಲಾಗುತ್ತದೆ.
ಬಿರ್ಲಾ A1 ಸ್ಟ್ರಾಂಗ್ಕ್ರೀಟ್ನಲ್ಲಿ ಪ್ರಶಸ್ತ ಪ್ರಮಾಣದ ಮಿನರಲ್ ಆ್ಯಡ್ಮಿಕ್ಸ್ಚರ್ಸ್ ಇವೆ (ಸುಮಾರು 18%). ಇದರಿಂದಾಗಿ ಕಾಂಕ್ರೀಟಿಗೆ ಹೆಚ್ಚು ಆರಂಭಿಕ ಗಟ್ಟಿಮುಟ್ಟುತನ ಸಿಗಲು ಕಾರಣವಾಗುವ ಸಿ3ಎಸ್ C3S ಮಾಲಿಕ್ಯೂಲ್ಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತವೆ. ಅದೇ ವೇಳೆ, ಉಚ್ಚ ಗುಣಮಟ್ಟದ ಮಿನರಲ್ ಆ್ಯಡ್ಮಿಕ್ಸ್ಚರ್ಸ್ ಡಬಲ್ ಕ್ಯಾಲ್ಶಿಯಮ್-ಸಿಲಿಕೇಟ್-ಹೈಡ್ರೇಟ್ (C-S-H) ಜೆಲ್ ನಿರ್ಮಾಣವನ್ನು ತ್ವರಿತಗೊಳಿಸುವುದರಿಂದ ಕಾಂಕ್ರೀಟ್ ದೀರ್ಘ ಕಾಲದಲ್ಲಿ ಗಟ್ಟಿಮುಟ್ಟುತನವನ್ನು ಪಡೆಯುತ್ತಲೇ ಹೋಗುತ್ತದೆ.
Optimum fineness of Birla A1 StrongCrete makes the concrete highly workable in terms of mixing, transportation, and placement & compaction. This guarantees a denser, stronger and more compact concrete. The denser concrete thus formed also has an enhanced bond with the steel bars or reinforcement.
Optimum fineness of Birla A1 StrongCrete makes the concrete highly workable in terms of mixing, transportation, and placement & compaction. This guarantees a denser, stronger and more compact concrete. The denser concrete thus formed also has an enhanced bond with the steel bars or reinforcement.
ನೀವು ಬಿರ್ಲಾ A1 ಸ್ಟ್ರಾಂಗ್ಕ್ರೀಟ್ ಬಳಸಿ ನಿಮ್ಮ ಕನಸಿನ ಮನೆಯನ್ನು ನಿರ್ಮಿಸಿದಾಗ ನಿಮಗೆ ಹಲವಾರು ಲಾಭಗಳು ಸಿಗುತ್ತವೆ:
ಕಾಂಕ್ರೀಟ್ನ ಬಲ ವೃದ್ಧಿ ಎನ್ನುವುದು ಒಂದು ನಿಧಾನದ ಪ್ರಕ್ರಿಯೆ. ಸಾಮಾನ್ಯ ಸಿಮೆಂಟಿಗಿಂತ ಬಿರ್ಲಾ A1 ಸ್ಟ್ರಾಂಗ್ಕ್ರೀಟ್ ಹೆಚ್ಚು ಗಟ್ಟಿಮುಟ್ಟಾದ ಕ್ರಾಂಕ್ರೀಟನ್ನು ಕ್ಷಿಪ್ರವಾಗಿ ನೀಡುತ್ತದೆ. ಕಾಂಕ್ರೀಟ್ನ ಹೆಚ್ಚಿನ ಆರಂಭಿಕ ಗಟ್ಟಿಮುಟ್ಟುತನದ ದೆಸೆಯಿಂದ ಫೋರ್ಮ್ವರ್ಕನ್ನು ಬೇಗನೇ ತೆಗೆಯಲು ಅನುಕೂಲವಾಗುತ್ತದೆ (ಡಿ-ಶಟರಿಂಗ್), ಇದರಿಂದ ನಿರ್ಮಾಣಕ್ಕೆ ಬೇಕಾಗುವ ಸಮಯ ಉಳಿಯುತ್ತದೆ.
ಬಿರ್ಲಾ A1 ಸ್ಟ್ರಾಂಗ್ಕ್ರೀಟ್ನಿಂದ ತಯಾರಾದ ಕಾಂಕ್ರೀಟ್ ಕಾಸ್ಟಿಂಗ್ ನಂತರದ ಆರಂಭಿಕ 28 ದಿನಗಳಲ್ಲಿ ತನ್ನ ನಿರೂಪಿತ ಸಂಕೋಚಕ ಬಲವನ್ನು ಪಡೆಯುತ್ತದೆ. ಬಿರ್ಲಾ A1 ಸ್ಟ್ರಾಂಗ್ಕ್ರೀಟ್ನ ನವೀನ ಫಾರ್ಮುಲೇಶನ್ನಿಂದಾಗಿ ಇದರ ನಂತರವೂ ಅದು ಗಟ್ಟಿಮುಟ್ಟಾಗುತ್ತಲೇ ಇರುತ್ತದೆ. ಹೀಗಾಗಿ ಬಿರ್ಲಾ A1 ಸ್ಟ್ರಾಂಗ್ಕ್ರೀಟ್ RCC ಅಡಿಪಾಯ, ಕಾಲಮ್, ಬೀಮ್ ಹಾಗೂ ಸ್ಲ್ಯಾಬ್ಗಳಂತಹ ಚೌಕಟ್ಟಿನ ರಚನೆಗಳಲ್ಲಿ ಕಾಂಕ್ರೀಟಿನ ಬಳಕೆಗಾಗಿ ಸೂಕ್ತವಾಗುತ್ತದೆ.
ಸಿಮೆಂಟ್ ಪೇಸ್ಟ್ ಗಟ್ಟಿಯಾಗಿ ಒಂದು ನಿರ್ದಿಷ್ಟ ಹದಕ್ಕೆ ಬರುವ ತನಕ ಬೇಕಾಗುವ ಸಮಯಕ್ಕೆ ಅದರ ಸೆಟಿಂಗ್ ಟೈಮ್ ಎನ್ನುತ್ತಾರೆ. ಆರಂಭಿಕ ಸೆಟಿಂಗ್ ಟೈಮ್ (ಇನೀಶಿಯಲ್ ಸೆಟಿಂಗ್ ಟೈಮ್-IST) ತುಂಬ ಕಡಿಮೆ ಇರಲೂ ಬಾರದು, ಅಂತಿಮ ಸೆಟಿಂಗ್ ಟೈಮ್ (ಫೈನಲ್ ಸೆಟಿಂಗ್ ಟೈಮ್ -ಎಫ್ಎಸ್ಟಿ) ತುಂಬ ಹೆಚ್ಚಿರಲೂ ಬಾರದು. ಬಿರ್ಲಾ A1 ಸ್ಟ್ರಾಂಗ್ಕ್ರೀಟ್, 120 ನಿಮಿಷಗಳ IST ಹಾಗೂ 175 ನಿಮಿಷಗಳ ಎಫ್ಎಸ್ಟಿ ಹೊಂದಿದ್ದು ಇದರಿಂದ ಒಟ್ಟು ಪ್ರಕ್ರಿಯೆ ಅನುಕೂಲಕರ ಮತ್ತು ಕ್ಷಿಪ್ರವಾಗುತ್ತದೆ. ಬಿರ್ಲಾ A1 ಸ್ಟ್ರಾಂಗ್ಕ್ರೀಟ್ ತನ್ನ ಕ್ಷಿಪ್ರ ಸೆಟಿಂಗ್ ಟೈಮ್ನಿಂದ ಅನುಕ್ರಮದ ಕಾಂಕ್ರೀಟ್ ಪದರಗಳ ಕ್ಷಿಪ್ರ ಸ್ಥಾಪನೆಗೆ ಸಹಾಯ ಮಾಡುವುದರ ಜೊತೆಗೆ ಸ್ಕ್ಯಾಫೋಲ್ಡಿಂಗ್ ಅಥವಾ ಫೋರ್ಮ್ವರ್ಕನ್ನು ಬೇಗ ಹಾಗೂ ಸುರಕ್ಷಿತವಾಗಿ ತೆಗೆಯಲು ಅನುವು ಮಾಡಿಕೊಡುತ್ತದೆ.
ಕಡಿಮೆ ಹೀಟ್ ಆಫ್ ಹೈಡ್ರೇಶನ್ನ ದೆಸೆಯಿಂದ ಬಿರ್ಲಾ A1 ಸ್ಟ್ರಾಂಗ್ಕ್ರೀಟ್ ಶಾಖದಿಂದಾಗುವ ಬಿರುಕುಗಳಂತಹ (ಥರ್ಮಲ್ ಕ್ರ್ಯಾಕ್ಸ್) ರಚನ್ಮಾತಕ ಹಾನಿಗಳಿಂದ ಮನೆಗಳನ್ನು ಸಂರಕ್ಷಿಸುತ್ತದೆ.
ಬಿರ್ಲಾ A1 ಸ್ಟ್ರಾಂಗ್ಕ್ರೀಟ್ ಹೈಡ್ರೇಶನ್ ಪ್ರಕ್ರಿಯೆಯಲ್ಲಿ ಕಡಿಮೆ ಶಾಖವನ್ನು ಬಿಡುಗಡೆ ಮಾಡುತ್ತದೆ. ಈ ಗುಣದಿಂದಾಗಿ ದಪ್ಪ ಕಾಂಕ್ರೀಟ್ ಭಾಗಗಳಲ್ಲಿ ಶಾಖದಿಂದಾಗುವ ಬಿರುಕುಗಳ ಅಪಾಯವನ್ನು ತಗ್ಗಿಸಲು ಅನುಕೂಲವಾಗುತ್ತದೆ.
ಡಬಲ್ ಕ್ಯಾಲ್ಶಿಯಮ್-ಸಿಲಿಕೇಟ್-ಹೈಡ್ರೇಟ್ ಜೆಲ್ (C-S-H) ನಿರ್ಮಾಣದಿಂದಾಗಿ ಬಿರ್ಲಾ A1 ಸ್ಟ್ರಾಂಗ್ಕ್ರೀಟ್ ರೀಬಾರ್ಗಳನ್ನು (ರೀಇನ್ಫೋರ್ಸ್ಡ್ ಸ್ಟೀಲ್ ಬಾರ್ಸ್) ಸವೆತದಿಂದ ಸಂರಕ್ಷಿಸಿ, ತನ್ಮೂಲಕ ಸಂರಚನೆಯ ಬಾಳಿಕೆಯನ್ನು ಹೆಚ್ಚಿಸುತ್ತದೆ.
ಈ ಜೆಲ್ ನಿರ್ಮಾಣದಿಂದ ಕಾಂಕ್ರೀಟ್ ದಟ್ಟ ಮತ್ತು ತೆರಪು-ಮುಕ್ತ ಆಗುತ್ತದೆ. ಅಲ್ಲದೇ ಇದರಿಂದ ರೀಬಾರ್ಗಳಿಗೆ ಪ್ರಕೃತಿಯ ಹಾನಿಕಾರಿ ಪರಿಣಾಮಗಳಿಂದ ಸುರಕ್ಷೆಯೂ ದೊರೆತು, ಇದರಿಂದ ಸವೆತ ನಿಗ್ರಹ ಲಭಿಸುತ್ತದೆ.
ಬಿರ್ಲಾ A1 ಸ್ಟ್ರಾಂಗ್ಕ್ರೀಟ್ ವಿಶೇಷವಾಗಿ ನಿರ್ಮಿತವಾದ ಎಲ್ಪಿಪಿ (ಲ್ಯಾಮಿನೇಟೆಡ್ ಪಾಲಿಪ್ರೊಪೈಲೀನ್) ಚೀಲಗಳಲ್ಲಿ ಬರುತ್ತದೆ: ಇವು ಹಸ್ತಕ್ಷೇಪಕ್ಕೆ ಆಸ್ಪದ ನೀಡುವುದಿಲ್ಲ, ಹೀಗಾಗಿ ಸಿಮೆಂಟಿನ ಸಾಗಾಣಿಕೆಯಲ್ಲಿ ಮತ್ತು ನಿರ್ಮಾಣ ಸ್ಥಳದಲ್ಲಿ ಅದರ ನಿರ್ವಹಣೆಯಲ್ಲಿ ಸಿಮೆಂಟ್ ಪೋಲಾಗುವುದಿಲ್ಲ. ಈ ಚೀಲಗಳ ತೇವ-ಮುಕ್ತ ಗುಣದಿಂದಾಗಿ ಸಿಮೆಂಟ್ ತಾಜಾ ಆಗಿರುತ್ತದೆ.
ಗಮನಿಸಿ: ತಾಣದಲ್ಲಿ ಚೀಲಗಳನ್ನು ಬಳಸುವಾಗ ಹುಕ್ಕುಗಳನ್ನು ಉಪಯೋಗಿಸಬೇಡಿ.